ಯಾವುದೇ ಪ್ರವೇಶ ಶುಲ್ಕವಿಲ್ಲ.... ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ಕೊಡಲಾಗುವುದು ಆರೋಗ್ಯವೇ ಭಾಗ್ಯ...ಆರೋಗ್ಯಕ್ಕಾಗಿ ಓಟ

ಗುರುವಾರ, ಮಾರ್ಚ್ 10, 2011

ಯಶಸ್ವಿ ಮ್ಯಾರಾಥಾನ್-2011






























































ಕುಕನೂರಿನಲ್ಲಿ ನಡೆದ ಮ್ಯಾರಾಥಾನ್ ೨೦೧೧ ಯಶಸ್ವಿಯಾಗಿ ಪೂರ್ಣಗೊಂಡಿತು. ಈ ಸಲ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು ವಿಶೇಷ. ಕುಶ್ ನ ಸಂಘಟಕರು ಅತ್ಯುತ್ತಮವಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಮೆಹಬೂಬ ಪಾಷಾ ಅವರ ಸ್ನೇಹಿತರ ಬಳಗ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿ ಮೆಚ್ಚುಗೆಗೆ ಪಾತ್ರವಾಯಿತು. ಕರ್ನಾಟಕದ ನಾನಾಮೂಲೆಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಜನರ ಮನಸ್ಸನ್ನು ಗೆದ್ದರು.ಹಳದಿ ಮತ್ತು ಬಿಳಿಯ ಟೀ ಶರ್ಟ ಧರಿಸಿದ್ದ ಕುಶ್ ಪಡೆ ಅತ್ಯುತ್ತಮವಾಗಿ ಸಂಘಟಿಸಿತು. ಕಾರ್ಯಕ್ರಮದ ಪ್ರಾಯೋಜಕ ಮೆಹಬೂಬ ಪಾಷಾ ದೂರದ ಊರಲಿದ್ದರೂ ಅವರ ಕೊರತೆಯಾಗದಂತೆ ಅವರ ಟೀಮ್ ಕೆಲಸ ಮಾಡಿತು.
ಕುಕನೂರು ಅಷ್ಟೇ ಏಕೆ ನಮ್ಮ ಸುತ್ತಮುತ್ತ ದುಡ್ಡಿರುವವರು, ಕೋಟ್ಯಾಧೀಶರು ಎನೂ ಕಮ್ಮಿ ಇಲ್ಲ. ಆದರೆ ಒಳ್ಳೆಯ ಮನಸ್ಥಿತಿ ಉಳ್ಳವರು , ಸಮಾಜಕ್ಕಾಗಿ ಮಿಡಿಯುವವರು ಬಹಳ ವಿರಳ. ಅವರಲ್ಲಿ ಒಬ್ಬರು ಮೆಹಬೂಬ್ ಪಾಷಾ. ಅವರ ಕುಟುಂಬದ ಸದಸ್ಯರೂ ಸಹ ಅಷ್ಟೇ ಸರಳವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅತಿಥಿಗಳಾಗಿದ್ದ ಪ್ರೊ.ಅಲ್ಲಮಪ್ರಭು ಬೆಟ್ಟದೂರ ಹಾಗೂ ಇತರರು ಕುಶ್ ಸಂಸ್ಥೆಯ ಕೆಲಸವನ್ನು ಶ್ಲಾಘಿಸಿದರು.
ಕುಶ್ ಟೀಮ್ ಗೆ ಶುಭಾಷಯಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ