ಯಾವುದೇ ಪ್ರವೇಶ ಶುಲ್ಕವಿಲ್ಲ.... ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ಕೊಡಲಾಗುವುದು ಆರೋಗ್ಯವೇ ಭಾಗ್ಯ...ಆರೋಗ್ಯಕ್ಕಾಗಿ ಓಟ

ಗುರುವಾರ, ಮಾರ್ಚ್ 10, 2011

ಯಶಸ್ವಿ ಮ್ಯಾರಾಥಾನ್-2011






























































ಕುಕನೂರಿನಲ್ಲಿ ನಡೆದ ಮ್ಯಾರಾಥಾನ್ ೨೦೧೧ ಯಶಸ್ವಿಯಾಗಿ ಪೂರ್ಣಗೊಂಡಿತು. ಈ ಸಲ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು ವಿಶೇಷ. ಕುಶ್ ನ ಸಂಘಟಕರು ಅತ್ಯುತ್ತಮವಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಮೆಹಬೂಬ ಪಾಷಾ ಅವರ ಸ್ನೇಹಿತರ ಬಳಗ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿ ಮೆಚ್ಚುಗೆಗೆ ಪಾತ್ರವಾಯಿತು. ಕರ್ನಾಟಕದ ನಾನಾಮೂಲೆಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಜನರ ಮನಸ್ಸನ್ನು ಗೆದ್ದರು.ಹಳದಿ ಮತ್ತು ಬಿಳಿಯ ಟೀ ಶರ್ಟ ಧರಿಸಿದ್ದ ಕುಶ್ ಪಡೆ ಅತ್ಯುತ್ತಮವಾಗಿ ಸಂಘಟಿಸಿತು. ಕಾರ್ಯಕ್ರಮದ ಪ್ರಾಯೋಜಕ ಮೆಹಬೂಬ ಪಾಷಾ ದೂರದ ಊರಲಿದ್ದರೂ ಅವರ ಕೊರತೆಯಾಗದಂತೆ ಅವರ ಟೀಮ್ ಕೆಲಸ ಮಾಡಿತು.
ಕುಕನೂರು ಅಷ್ಟೇ ಏಕೆ ನಮ್ಮ ಸುತ್ತಮುತ್ತ ದುಡ್ಡಿರುವವರು, ಕೋಟ್ಯಾಧೀಶರು ಎನೂ ಕಮ್ಮಿ ಇಲ್ಲ. ಆದರೆ ಒಳ್ಳೆಯ ಮನಸ್ಥಿತಿ ಉಳ್ಳವರು , ಸಮಾಜಕ್ಕಾಗಿ ಮಿಡಿಯುವವರು ಬಹಳ ವಿರಳ. ಅವರಲ್ಲಿ ಒಬ್ಬರು ಮೆಹಬೂಬ್ ಪಾಷಾ. ಅವರ ಕುಟುಂಬದ ಸದಸ್ಯರೂ ಸಹ ಅಷ್ಟೇ ಸರಳವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅತಿಥಿಗಳಾಗಿದ್ದ ಪ್ರೊ.ಅಲ್ಲಮಪ್ರಭು ಬೆಟ್ಟದೂರ ಹಾಗೂ ಇತರರು ಕುಶ್ ಸಂಸ್ಥೆಯ ಕೆಲಸವನ್ನು ಶ್ಲಾಘಿಸಿದರು.
ಕುಶ್ ಟೀಮ್ ಗೆ ಶುಭಾಷಯಗಳು.

ಸೋಮವಾರ, ಫೆಬ್ರವರಿ 28, 2011

ಸ್ಥಳ ಮತ್ತು ದಿನಾಂಕ

ದಿನಾಂಕ : 6-3-2011 ರವಿವಾರ ಬೆಳಿಗ್ಗೆ 7.00 ಗಂಟೆಗೆ
ಸ್ಥಳ : ಎಪಿಎಂಸಿ ಪ್ರಾಂಗಣ, ಕುಕನೂರ . ತಾ:ಯಲಬುರ್ಗಾ ಜಿ: ಕೊಪ್ಪಳ

ವಿಶೇಷ ಸೂಚನೆಗಳು

1.ಭಾಗವಹಿಸುವ ಆಸಕ್ತರು ದಿನಾಂಕ 4-3-2011ರೊಳಗಾಗಿ ನೋಂದಾಯಿಸಬೇಕು.
2.ಸ್ಪರ್ಧೆಯಲ್ಲಿ 500 ಜನರಿಗೆ ಮಾತ್ರ ಅವಕಾಶ
3.ನಿಗದಿತ ಸಮಯಕ್ಕೆ ಬಾಋದ ಸ್ಪರ್ಧಾಳುಗಳಿಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ.
4.ಸ್ಪರ್ಧಿಗಳ ಆರೋಗ್ಯ ಸಂಬಂಧಿ ತಾಪತ್ರಯಗಳಿಗೆ ಸಂಘಟಕರು- ಸಂಸ್ಥೆ ಹೊಣೆಯಲ್ಲ
5.ಪ್ರಥಮೋಚಾರ ಸೌಲಭ್ಯವಿದೆ
6.ತೀರ್ಪುಗಾರರ ನಿರ್ಣಯವೇ ಅಂತಿಮ
7.ಮಕ್ಕಳ ಜನ್ಮದಿನಾಂಕ ದಾಖಲೆ ನೀಡಬೇಕು.
8.ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಯಿಲ್ಲ .

ಯಶಸ್ವಿ 3ನೇ ವರ್ಷ

ಇದು ಸತತವಾಗಿ 3ನೇ ವರ್ಷ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮ !

ಆಕರ್ಷಕ ಬಹುಮಾನಗಳು




ಭಾನಾಪೂರ್ ಎಕ್ಸ್ ಪ್ರೆಸ್





































ಅಮೇರಿಕಾದಲ್ಲಿ ನೆಲೆಸಿರುವ ಕುಕನೂರಿನ ಉತ್ಸಾಹಿ ಯುವಕ ಮೆಹಬೂಬ ಪಾಷಾ ಕಳೆದ ೩ ವರ್ಷಗಳಿಂದ ರಾಜ್ಯಮಟ್ಟದ ಮ್ಯಾರಾಥಾನ್ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದಾರೆ. ನಶಿಸುತ್ತಿರುವ ಕ್ರೀಡೆಗಳಿಗೆ ಜೀವ ತುಂಬವ, ಆಟೋಟಗಳ ಬಗೆಗೆ ಅರಿವು ಮೂಡಿಸುವ, ಅದರಲ್ಲೂ ಓಟ-ಹಳ್ಳಿಗಾಡು ಓಟ, ಕಾಲ್ನಡಿಗೆಗಳತ್ತ ಜನರಲ್ಲಿ ಒಲವು,ಪ್ರೀತಿ,ಆಸಕ್ತಿ ಬಿತ್ತುವ ಉದ್ದೇಶದಿಂದ ಈ ಮ್ಯಾರಾಥಾನ್ ಎರ್ಪಡಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ಗ್ರಾಮದಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯ ಹೆಸರು ಭಾನಾಪೂರ್ ಎಕ್ಸ್ ಪ್ರೆಸ್. ದೊಡ್ಡವರಿಗಾಗಿ ೫ ಕಿ.ಮಿ ಮತ್ತು ೬ ರಿಂದ ೧೨ ವರ್ಷದ ಮಕ್ಕಳಿಗಾಗಿ ೬೦೦ ಮೀಟರ್ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಗೆದ್ದವರಿಗೆ ಆಕರ್ಷಕ ಟ್ರೋಪಿ, ನಗದು ಬಹುಮಾನ ನೀಡುತ್ತಿದ್ದಾರೆ. ಪ್ರತಿ ಸಾರಿ ೫೦೦ ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದಾರೆ.ಈ ಸಲ ೬-೩-೨೦೧೧ ರವಿವಾರ ಬೆಳಿಗ್ಗೆ ೭.೦೦ ಗಂಟೆಗೆ ಕುಕನೂರು ಗ್ರಾಮದ ಎ.ಪಿ.ಎಂ.ಸಿ ಪ್ರಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ.ಆಸಕ್ತರು ಸಂಪರ್ಕಿಸಲು,ಭಾಗವಹಿಸಲು ಕೋರಲಾಗಿದೆ.ಆಸಕ್ತರು ೪-೩-೨೦೧೧ ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಬೇಕು.ನವೀನ್ ಕಲ್ಮನಿ ೯೯೬೪೪೪೦೬೦೬೫ಶಿವಕುಮಾರ ತಳಕಲ್ಲ ೯೯೮೬೫೬೯೦೭೮
ಮಹ್ಮದ ರಫಿ 9449663597
ರವಿ ಜಕ್ಕಾ 9986254825
ಇ-ಮೇಲ್ : bhanapurexpress@gmail.com ನಲ್ಲಿ ನೋಂದಾಯಿಸಿ

Bhanapur Express - 2011

well come to Bhanapur Express - 2011
Marathon Blog.